ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿಯವರು ಮಾಜಿ ಶಾಸಕರು, ಸಂಸದರು ಹಾಗೂ ರಾಜಕೀಯ ಧುರೀಣರು. == ಜನನ == ಗುರಡ್ಡಿಯವರು 11ನೇ ಏಪ್ರಿಲ್, 1928ರಂದು ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ನೀರಲಗಿ ಗ್ರಾಮದಲ್ಲಿ ಜನಿಸಿದರು. == ನಿರ್ವಹಿಸಿದ ಖಾತೆಗಳು == 1980ರಲ್ಲಿ ನಡೆದ ಲೋಕಸಭೆ 8ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಲೋಕಸಭೆಗೆ ಆಯ್ಕೆಯಾದರು. 1986-87ರ ಅವಧಿಯಲ್ಲಿ ಬೇಡಿಕೆ ಸಮಿತಿಯ ಸದಸ್ಯರಾಗಿದ್ದರು. 1967-1971ವರೆಗೆ ಎರಡು ಬಾರಿ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದರು. ವಿಜಯಪುರ ಜಿಲ್ಲಾ ಡಿ.ಸಿ.ಸಿ. ಬ್ಯಾಂಕಿನ ಸದಸ್ಯರಾಗಿದ್ದರು. ಮುದ್ದೇಬಿಹಾಳ ತಾಲ್ಲೂಕು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದರು. ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಒಕ್ಕೂಟದ ಉಪಾಧ್ಯಕ್ಷರಾಗಿದ್ದರು. == ನಿಧನ == 23 ಜೂಲೈ, 2006ರಂದು 78ನೇ ವಯಸ್ಸಿನಲ್ಲಿ ನಿಧನರಾದರು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸಾಲವಾಡಗಿ ಗ್ರಾಮದಲ್ಲಿ ಧುರೀಣರ ಸಮಾಧಿಯಿದೆ. == ಉಲ್ಲೇಖಗಳು ==